•  
  •  
  •  
  •  
Index   ವಚನ - 461    Search  
 
ಕೂಟದ ಸುಖದಲ್ಲಿ ನೋಟ ಕಂಬೆಳಗಾಗೆ ಬೇಟ ಬೇರುಂಟೆ ಹೇಳಾ? ಅವ್ವಾ. ನೋಡಿದ ದೃಷ್ಟಿ ಎವೆ ಕುಂದದಡೆ ಮೋಹದ ಪರಿಯೆಂತುಟು ಹೇಳಾ? ನೋಟ ಬೇಟ ಕೂಟ ಸಮಸುಖ ಸಮರತಿಯಾದರೆ ಕಪಿಲಸಿದ್ಧಮಲ್ಲಿನಾಥಯ್ಯಾ ಬೇರಿಲ್ಲವವ್ವಾ.
Transliteration Kūṭada sukhadalli nōṭa kambeḷagāge bēṭa bēruṇṭe hēḷā? Avvā. Nōḍida dr̥ṣṭi eve kundadaḍe mōhada pariyentuṭu hēḷā? Nōṭa bēṭa kūṭa samasukha samaratiyādare kapilasid'dhamallināthayya bērillavavvā.