•  
  •  
  •  
  •  
Index   ವಚನ - 475    Search  
 
ಗಂಡ ಬಾರನು ಎನ್ನ ತವರೂರಿಗೆ ಹೋಗುವೆನೆನಲು, ನೋಡೆ, ನೋಡೆಲಗವ್ವಾ ಬೇಟೆಯನಾಡುವ ನಾಯತಲೆಯ ಕೊಯ್ದಿಟ್ಟು, ತಾ ಬೇರೆ ಬೇಟಕಾರನಾದ. ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನ ನೆಲೆಯಲ್ಲಿ ನಿಲವ ಕೊಂಡನು; ಹುಚ್ಚನ ಸಂಗ ನಿಶ್ಚಯವಾಯಿತು.
Transliteration Gaṇḍa bāranu enna tavarūrige hōguvenenalu, nōḍe, nōḍelagavvā bēṭeyanāḍuva nāyataleya koydiṭṭu, tā bēre bēṭakāranāda. Nam'ma kapilasid'dhamallikārjuna neleyalli nilava koṇḍanu; huccana saṅga niścayavāyitu.