ವಚನ - 493     
 
ಗುರುವಿಂದನ್ಯ ದೈವವಿಲ್ಲೆಂಬುದಕ್ಕೆ ಆಗಮವಾಣಿಯೆ ಸಾಕ್ಷಿ. ಅದೆಂತೆಂದಡೆ: ``ಗುರುದೇವೋ ಮಹಾದೇವೋಗುರುದೇವಸ್ಸದಾಶಿವಃ| ಗುರುದೇವಾತ್ಪರಂ ನಾಸ್ತಿ ತಸ್ಮೈ ಶ್ರೀಗುರುವೆ ನಮಃ|| ಗುರುಃ ಶಂಭುರ್ಗುರುರ್ಜ್ಙಾನಂ ಗುರುರ್ಮಾತಾ ಗುರುಃ ಪಿತಾ| ಗುರುರ್ಬಂಧುರ್ಗುರುಃ ಸಾಕ್ಷಾದ್ದೇವತಾಗಣಪುಂಗವಃ|| ಅನುಷ್ಠಾನಾದಿಕಾಂ ಪೂಜಾಂ ಯಃ ಕರೋತಿ ಗುರುಂ ವಿನಾ| ಯಾತಿ ನೀಚಾನಿ ಜನ್ಮಾನಿ ತಸ್ಮಾದ್ಗುರುವರಂ ಭಜೇತ್|| ಷಣ್ಮಾಸೇ ವ್ಯಾಪಿ ವರ್ಷೇ ವಾ ವರ್ಷೇ ವಾ ದ್ವಾದಶಾತ್ಮಕೇ| ಗುರೋರಾಲೋಕನಂ ಯಸ್ತು ನ ಕರೋತಿ ಸ ಪಾಪವಾನ್||" ಎಂಬುದೆ ಪ್ರಮಾಣವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.