Index   ವಚನ - 504    Search  
 
ಗುರು ಸಮಾಧಿಯ ಸಮ ತನ್ನ ಸಮಾಧಿಯ ಮಾಡಲಂದು, ವೀರವಿಕ್ರಮಚೋಳನ ದೇಹ ಬಯಲಿಗೆ ಬಾಯಿದೆರೆದು ಬರಲಿಲ್ಲವೆ? ಗುರು ಸಮಾಧಿಯ ಮುಂದೆ ತನ್ನ ಸಮಾಧಿಯ ಮಾಡಲಂದು, ರಾಜೇಂದ್ರಚೋಳನ ದೇಹ ಎದ್ದು ನಮಿಸಿ ಸಮಾಧಿಯ ಹೋಗಲಿಲ್ಲವೆ? ಇದರ ಕೀಲ ಪ್ರಮಥರು ಅರಿಯರೆ? ಇದರಂದವ ಗೌರಿ ನಾಗಾಯಿ ಅರಿಯಳೆ? ಇದರ ಕೀಲ ಕಪಿಲಸಿದ್ಧಮಲ್ಲಿಕಾರ್ಜುನ ಶರಣನ ರಾಣಿ ನೀಲಾಂಬಿಕೆಯರಿಯಳೆ ಸೊಡ್ಡಯ್ಯಾ?