•  
  •  
  •  
  •  
Index   ವಚನ - 503    Search  
 
ಗುರು ಶಿಷ್ಯಾನಂದವ ಮನಸಿಗೆ ಬಂದಂತೆ ಹೇಳುವೆನು ಎಲೆ ಅವ್ವಾ. ಬಾಲನ ಮಾತೀಗ ಮಾತೆಪಿತರಿಗೆ ಪ್ರೀತಿಯಪ್ಪಂತೆ ಎನ್ನ ಮಾತ ಆಲಿಸುವವರು ಶಿವಭಕ್ತರು, ಎನ್ನ ಮಾತಾ ಪಿತರು ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Guru śiṣyānandava manasige bandante hēḷuvenu ele avvā. Bālana mātīga mātepitarige prītiyappante enna māta ālisuvavaru śivabhaktaru, enna mātā pitaru kāṇā kapilasid'dhamallikārjunā.