ಗುರುಸ್ವಾಮಿ ಧರಿಸುವ ಮಡಿಯ
ನಾ ಸುತ್ತಿದೆನಾದಡೆ,
ಶಿರವು ಬಿರಿದು ಬೀಳಾಗಲಿ ದೇವಾ.
ಗುರುಸ್ವಾಮಿ ಧರಿಸುವ ಕಂಠಮಾಲೆಯ
ನಾ ಧರಿಸಿದೆನಾದಡೆ,
ಕಂಠ ಕತ್ತರಿಸಿ ಹೋಗಲಿ ದೇವಾ.
ಗುರುಸ್ವಾಮಿ ಪಾನವ ಮಾಡುವ ಗಿಂಡಿಯಲಿ
ನಾ ಪಾನವ ಮಾಡಿದೆನಾದಡೆ
ನಾಲಗೆ ಸೀಳಿಹೋಗಲಿ ದೇವಾ.
ಗುರುಸ್ವಾಮಿ ಶಯನಿಸುವ ಸುಪ್ಪತ್ತಿಗೆಯಲ್ಲಿ
ನಾ ಶಯನ ಮಾಡಿದೆನಾದಡೆ
ಎನ್ನಂಗದಲಿ ಕ್ರಿಮಿಗಳು ಬೀಳಲಿ ದೇವಾ,
ಕಪಿಲಸಿದ್ಧಮಲ್ಲಿಕಾರ್ಜುನದೇವಾ.
Art
Manuscript
Music
Courtesy:
Transliteration
Gurusvāmi dharisuva maḍiya
nā suttidenādaḍe,
śiravu biridu bīḷāgali dēvā.
Gurusvāmi dharisuva kaṇṭhamāleya
nā dharisidenādaḍe,
kaṇṭha kattarisi hōgali dēvā.
Gurusvāmi pānava māḍuva giṇḍiyali
nā pānava māḍidenāde
nālage sīḷihōgali dēvā.
Gurusvāmi śayanisuva suppattigeyalli
nā śayana māḍidenāde
ennaṅgadali krimigaḷu bīḷali dēvā,
kapilasid'dhamallikārjunadēvā.