ವಚನ - 507     
 
ಗ್ರಾಮಕ್ಕೊಬ್ಬರಸಿಲ್ಲದೆ ಗ್ರಾಮವಳುತ್ತಿದೆ ನೋಡಾ. ಗ್ರಾಮವನಾಳುವ ಅರಸಿನ ಮನೆಯಲ್ಲಿ ಸದೆ ಬೆಳೆದಿದೆಯಯ್ಯಾ. ಗ್ರಾಮಕ್ಕೆ ಬಂದ ಕಟ್ಟರಸಿಂಗೆ ಪಟ್ಟವ ಕಟ್ಟಿ, ಅರಸಿನ ಮನೆಗಳನನುಗೆಯ್ದು, ಹರುಷದಿಂದ ಕಾಣಿಕೆಯಿಕ್ಕಿಸಿಕೊಳ್ಳಾ, ಕಪಿಲಸಿದ್ಧಮಲ್ಲಿನಾಥಯ್ಯಾ.