ಗ್ರಾಮ ಪಟ್ಟಣವೈದು ಐದೈದ ನಾಯಕರು
ತೋರಿಪ್ಪರದ ಕಂಡು ಪ್ರತ್ಯಯವನು.
ಸೀಮೆ ಸಂಬಂಧವನು ಮೀರಿಪ್ಪ ನಾಯಕರು
ತಾವು ನಿಂದರು ಗಡಿಯ ಸಂಬಂಧವ
ಪರದಳವು ಬರಲಾಗಿ ಅರಿಯದೆ ಇದಿರಾಡಿ
ಅರಿತು ಬಿಟ್ಟರು ವೀರಧೀರರಾಗಿ.
ಅರಿವು ಮರಹನೆ ನುಂಗಿ ಕುರುಹುಗೆಟ್ಟಾ ಸೀಮೆ
ತೆರಹಿಲ್ಲದಾತ [ತಾ] ಪರಮಯೋಗಿ
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ
ತೆರಹಿನ ಪಟ್ಟಣದ ಪ್ರಭೆಯಿಂತುಟು.