ವಚನ - 516     
 
ಘಾತವಪ್ಪ ಶರಧಿ ಪ್ರೇತವಪ್ಪ ಅಡವಿ ಪಾತಕ ಭವಕೆ ಬಹ ಕೂಪದೊಳಗೆ ನೂಕಿದರೆ ಬೀಳೆ, ನಿನ್ನಾಧಾರವುಂಟು. ಅನಾದಿಸಂಸಿದ್ಧ ಯೋಗಮೂರ್ತಿ ನಿನ್ನ ಒಡನಾಡಿ ನಾ ನಿನ್ನ ಠಕ್ಕನರಿಯೆನೆ ಕಪಿಲಸಿದ್ಧಮಲ್ಲಿಕಾರ್ಜುನಾ.