Index   ವಚನ - 532    Search  
 
ಜಲದೊಳಗೆ ಭವಿಸಿತ್ತು ಜಲಕೆ ನಂದದ ಕಿಚ್ಚು. ಆ ಜಲಂಗಳು ಹಲವು: ಮತ್ತೆ ತನ್ನೊಳಗೆ ಜನನವು ಆ ಸ್ಥಳ. ಜಲಕೆ ನೆಲೆಯಾದ ಸೀಮೆ ತಾನೆ ಆ ಸ್ಥಳವು. ಸೀಮೆಯ ಮೀರಿ, ಒಲವೆ ಒಡಮನೆಯಾದ ಕಪಿಲಸಿದ್ಧಮಲ್ಲಿಕಾರ್ಜುನಾ.