•  
  •  
  •  
  •  
Index   ವಚನ - 537    Search  
 
ಜಾತಿ ವಿಜಾತಿಯ ನೀರ್ಗುಡಿಯ ಹೋದರೆ ಸುಡು ಹೋಗೆಂದು ನೂಂಕಿತ್ತೆ ಆ ಜಲವು! ಆ ಜಲದಂತಾಗಬೇಡವೆ ಹಿರಿಯರಾದವರು. ಎನ್ನ ಮನ ವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಬುದ್ಧಿ ಎನ್ನನೆಂದು ಬಂದು ಪೊರ್ದಿಪ್ಪುದೊ ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನದೇವರ ದೇವಾ.
Transliteration Jāti vijātiya nīrguḍiya hōdare suḍu hōgendu nūṅkitte ā jalavu! Ā jaladantāgabēḍave hiriyarādavaru. Enna mana vicchandavāgadondeḍeyallippantappa nim'madondu samatābud'dhi ennanendu bandu pordippudo hēḷā, kapilasid'dhamallikārjunadēvara dēvā.