Index   ವಚನ - 550    Search  
 
ತಂದೆಯೊಡನುಂಡ ಶಿಶು ತಾಯಿಯೊಡನುಣ್ಣದೆ? ಮನೆಯಲುಂಡ ಮಿತ್ರನು ತನ್ನ ಮಿತ್ರನಲ್ಲುಣ್ಣನೆ? ಇದು ಕಾರಣ, ಅಲ್ಲಮಯ್ಯನ ಬೋಧೆಯನು, ತಮ್ಮ ಬೋಧೆಯನು ಕೇಳುವ ಬಾಲರಿಗೆ ಜನನೀಜನಕರ ಭೋಜನ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.