•  
  •  
  •  
  •  
Index   ವಚನ - 551    Search  
 
ತರ್ಕವನು ಮೀರಿಪ್ಪ ತತ್ವ ಕ್ರೀಯಾಗಿಪ್ಪ ಮತ್ತೆ ತ್ವಮಸಿಯ ಸೀಮೆ ಒಡಲಪ್ಪನೈ. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿಯ ಮುಟ್ಟಿದ್ದ ಆರರ ಪರಿಯಿಂತುಟೈ. ಕಪಿಲಸಿದ್ಧಮಲ್ಲಿಕಾರ್ಜುನನ ಭಕ್ತಿಕ್ರೀಯನು ಕೂಡಿದಾತ ನಾನು.
Transliteration Tarkavanu mīrippa tatva krīyāgippa matte tvamasiya sīme oḍalappanai. Bhakta māhēśvara prasādi prāṇaliṅgiya muṭṭidda ārara pariyintuṭai. Kapilasid'dhamallikārjuna bhaktikriyanu kūḍidāta nānu.