ತಟ್ಟುವ ಮುಟ್ಟುವ ಭೇದವನೊಲ್ಲ;
ಅದೇನು ಕಾರಣ?
ಐದಾರು ಪ್ರಸಾದದಲ್ಲಿ ಈರೈದು
ಪಾದೋದಕದಲ್ಲಿ ಸಂಪನ್ನನಾಗಿ
ಅವನ ಲಿಂಗತನುವೆನ್ನದಿರಿ ಕಂಡಿರೆ,
ಅದು ಪ್ರಸಾದತನು.
ಆತನ ಮಸ್ತಕದಲ್ಲಿ ಒಪ್ಪಿಪ್ಪ ಲಿಂಗದ ಗುಣದಿಂದ,
ಆತನು ಲಿಂಗತನುವಾದನೈಸಲ್ಲದೆ
ಆತನು ಸಾಕ್ಷಾತ್‍ಪ್ರಸಾದತನು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Taṭṭuva muṭṭuva bhēdavanolla;
adēnu kāraṇa?
Aidāru prasādadalli īraidu
pādōdakadalli sampannanāgi
avana liṅgatanuvennadiri kaṇḍire,
adu prasādatanu.
Ātana mastakadalli oppippa liṅgada guṇadinda,
ātanu liṅgatanuvādanaisallade
ātanu sākṣāt prasādatanu kāṇā,
kapilasid'dhamallikārjunā.