Index   ವಚನ - 563    Search  
 
ತನ್ನನರಸಿ ಬಪ್ಪವರ ತಾನರಸಿ ಬಪ್ಪ ನೋಡಾ. ಎನ್ನ ದೇವನೆಲ್ಲಿದ್ದನಲ್ಲಿಗೆ ಹೋಗಿ `ಬಾರಾ' ಎಂದು ಮನದೊಳಗೆ ಅಚ್ಚೊತ್ತಿಕೊಂಬೆ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ.