ತನ್ನ ಕಾರ್ಯಕ್ಕೆ ಹೋಗುತ್ತಲಿ ಅಡವಿಯಲಿ ಅಸ್ತಮಾನವಾಗೆ
ಹಸಿದು ನಿಲಲಾರದೆ ಉಣಲಿಕ್ಕಿರವ್ವಾಯೆಂದು ಬೇಡಿದರೆ,
ನೀನಾರಾತನಾರಾತನೆಂದರೆ
ರೋಮರುಷ್ಟಿಯರತ್ಸಾತ್ರ[?] ನೋಡಯ್ಯ.
ಇತ್ತ ಬಾರಯ್ಯಾ ಬಾರಯ್ಯಾ ಎಂದು ಕರೆದು
ವೃಕ್ಷ ಭಿಕ್ಷವನಿಕ್ಕಿದುವು.
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನ ಶರಣರ ಹೆಸರು
ಕಲ್ಪವೃಕ್ಷ ನೋಡಯ್ಯಾ.
Transliteration Tanna kāryakke hōguttali aḍaviyali astamānavāgē
hasidu nilalārade uṇalikkiravvāyendu bēḍidare,
nīnārātanārātanendare
rōmaruṣṭiyaratsātra[?] Nōḍayya.
Itta bārayya bārayya endu karedu
vr̥kṣa bhikṣavanikkiduvu.
Enna kapilasid'dhamallināthayyana śaraṇara hesaru
kalpavr̥kṣa nōḍayya.