ತನುತ್ರಯದಲ್ಲಿ ಘನಲಿಂಗ ಪ್ರಾಣಸಂಬಂಧಿಯಾದವರ
ತೋರಯ್ಯಾ, ನಿಮ್ಮ ಧರ್ಮ.
ಅವಯವಂಗಳೆ ನಿಮ್ಮ ವದನಂಗಳಾಗಿ,
ಅರ್ಪಿತವಲ್ಲದ ಅನರ್ಪಿತವ ಕೊಳ್ಳರಾಗಿ,
ಐದಾರು ಪ್ರಸಾದದಲ್ಲಿ ಅನುಮಾನವಿಲ್ಲದೆ ನಿತ್ಯರಪ್ಪವರ,
ಈರೈದು ಪಾದೋದಕದಲ್ಲಿ ವಿರಳವಿಲ್ಲದೆ ವಿಮಲರಪ್ಪವರ,
ನೋಡಿ ಕಂಡೆಹೆನೆಂದಡೆ, ಎನಗೆ ಕಾಣಬಾರದು.
ಅವರಿಚ್ಛಾಮಾತ್ರದಲ್ಲಿ ನೀನಿಪ್ಪೆಯಾದಡೆ, ನಿನಗೆ ಕಾಣಬಹುದು.
ಅಲ್ಲದಿದ್ದಡೆ ನಿನಗೆಯೂ ಅಭೇದ್ಯ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tanutrayadalli ghanaliṅga prāṇasambandhiyādavara
tōrayya, nim'ma dharma.
Avayavaṅgaḷe nim'ma vadanagaḷāgi,
arpitavallada anarpitava koḷḷarāgi,
aidāru prasādadalli anumānavillade nityarappavara,
īraidu pādōdakadalli viraḷavillade vimalarappavara,
nōḍi kaṇḍ'̔ehenendaḍe, enage kāṇabāradu.
Avaricchāmātradalli nīnippeyādaḍe, ninage kāṇisitu.
Alladiddaḍe ninageyū abhēdya kāṇā,
kapilasid'dhamallikārjunā.