•  
  •  
  •  
  •  
Index   ವಚನ - 588    Search  
 
ತನುವೆಂಬ ಮಹಾಪರ್ವತದಲ್ಲಿ ಒಸರುತ್ತಿಪ್ಪ ನಿರ್ಝುರಿಗಳಿಂದ ಆ ಘನವನೊಡಗೂಡುವಿರ ಹೇಳಿರೆ? ಸ್ಥೂಲಸಮುದ್ರ ಅರವತ್ತುನಾಲ್ಕು ಕೋಟಿಯು ಮೂವತ್ತೆರಡು ಲಕ್ಷವು ಮೂವತ್ತೆರಡು ಸಾವಿರದ ಪರಿಪೂರ್ಣವಾಗಿಪ್ಪುದಾಗಿ ಅವು ತಮ್ಮ ತಮ್ಮ ಘನತೆಗೆ ತಾವೆ ಘನವೆಂದು ಮೊರವುತೈದಾವೆ. ಅವು ನೀವು ಸಿಡಿದುಬೀಳುವ ತುಂತುರುಮಾತ್ರಕ್ಕೆ ಸಮವಪ್ಪುದೆ? ಅಂತಪ್ಪ ಸಮುದ್ರಂಗಳು ಸವಾಲಕ್ಷಕೂಡಿ ನೀನೆಯ್ದುವ ಮಹಾಸಮುದ್ರದ ಒಂದು ಬಿಂದುವಿಗೆ ಸರಿಯೆ? ಅಯ್ಯಾ ನೀವೆಂಬ ಮಹಾಸುಧಾಸಮುದ್ರಕ್ಕೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tanuvemba mahāparvatadalli osaruttippa nirjhurigaḷinda ā ghanavanoḍagūḍuvira hēḷire? Sthūlasamudra aravattunālku kōṭiyu mūvatteraḍu lakṣavu mūvatteraḍu sāvirada paripūrṇavāgi avu tam'ma tam'ma ghanatege tāve ghanavendu moravutaidāve. Avu nīvu siḍidubīḷuva tunturumātrakke samavappude? Antappa samudraṅgaḷu savālakṣakūḍi nīneyduva mahāsamudrada ondu binduvige sariye? Ayyā nīvemba mahāsudhāsamudrakke, kapilasid'dhamallikārjunā.