ತನುವೆಂಬ ಹೇಳಿಗೆಗೆ ಮನಸರ್ಪನಾವರಿಸಿ,
ಇನಿದು ಬಂದಡೆ ಅದಕ್ಕಿಂಬುಗೊಡದೆ,
ಇರುತಿರ್ಪ ಸರ್ಪನನು ತೆಗೆದು
ಶಿವಲಿಂಗವನು ನೆಲೆಗೊಳಿಸಿದ
ಶ್ರೀ ಗುರುವೆ ಶರಣು ಶರಣೆಂಬ,
ವಾಕ್ಯಂಗಳಲ್ಲಿ ಆಕಾರ ಚತುಷ್ಟಯಮಾನಂದದಲ್ಲಿರಿಸಿದ
ಏಕೋ ರುದ್ರ ಶಿಷ್ಟ ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Tanuvemba hēḷigege manasarpanāvarisi,
inidu bandaḍe adakkimbugoḍade,
irutirpa sarpananu tegedu
śivaliṅgavanu nelegoḷisida
śrī guruve śaraṇu śaraṇemba,
vākyagaḷalli ākāra catuṣṭayamānandadallirisida
ēkō rudra śiṣṭa kapilasid'dhamallikārjunā.