•  
  •  
  •  
  •  
Index   ವಚನ - 595    Search  
 
ತರುಗಳ ಮುರಿದು ಗಗನಕ್ಕೀಡಾಡುವ ಅನಿಲರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ! ಗಜ ಸಿಂಹ ಶಾರ್ದೂಲವೆಂಬ ಅಧಿಕ ಮೃಗಂಗಳ ಮುರಿದೊತ್ತಿ ಕೆಡಹುತಿಪ್ಪ ವ್ಯಾಧಿರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ! ಕಾಣಲೀಯದೆ ಕೇಳಲೀಯದೆ ಅವಧಾನಂಗಳ ಕೆಡಿಸುತ್ತಿರ್ಪ ನಿದ್ರೆ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ! ಇಂತು ಆಳಿನಾಳಿನ ಅಂತಸ್ಥವನಾರಿಗೂ ಅರಿಯಬಾರದು. ಅನಾದಿಮೂಲದೊಡೆಯನ ಬಲ್ಲೆನೆಂಬ ಪರಿ ಎಂತೋ? ರೂಪೆಂದಡೆ ಶಬ್ದ, ನಿರೂಪೆಂದಡೆ ಶೂನ್ಯ; ಈ ಎರಡರ ಆದಿಯಿಂದತ್ತತ್ತ ಕಾಣಾ. ಎನ್ನ ತಂದೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು ಗುರುಕಾರುಣ್ಯವುಳ್ಳವರಿಗಲ್ಲದೆ ಅರಿಯಬಾರದು.
Transliteration Tarugaḷa muridu gaganakkīḍāḍuva anilarūpō nirūpō? Ballaḍe nīnu hēḷi bhō! Gaja sinha śārdūlavemba adhika mr̥gaṅgaḷa muridotti keḍahutippa vyādhirūpō nirūpō? Ballaḍe nīnu hēḷi bhō! Kāṇalīyade kēḷalīyade avadhānaṅgaḷa keḍisuttirpa nidre rūpō nirūpō? Ballaḍe nīnu hēḷi bhō! Intu āḷināḷina antasthavarigū ariyabāradu. Anādimūladoḍeyana ballenemba pari entō? Rūpendaḍe śabda, nirūpendaḍe śūn'ya; ī eraḍara ādiyindattatta kāṇā. Enna tande kapilasid'dhamallikārjunaliṅgavu gurukāruṇyavuḷḷavarigallade ariyabāradu.