•  
  •  
  •  
  •  
Index   ವಚನ - 596    Search  
 
ತರುಣ ಬೆಟ್ಟದ ನಡುವೆ ತಪಸಿ ಕುಳ್ಳಿದ್ದಹನೆ, ತರಗೆಲೆಗಳೂ ತನಗೆ ಆಧಾರವು. ಆದಿ ಆಧಾರ ಆಧೇಯ ಮುನ್ನಿಲ್ಲ ಮೂದೇವರಿಗೆ ದೀಕ್ಷಾಗುರು ತಾನೆಯಾಗಿ, ನಾನಾ ವಿಧದ ಗುಣದ ಸ್ವಾನುಭಾವದ ಮನೆಯ ಭಾನುವಿನ ಉದಯದಲಿ ವಿಕಸವಾಗಿ, ನಾನಾ ಗುಣರೂಪ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದಾ ಸುಖತರದ ಅರೂಪುವಾಗಿ.
Transliteration Taruṇa beṭṭada naḍuve tapasi kuḷḷiddahane, taragelegaḷū tanage ādhāravu. Ādi ādhāra ādheya munnilla mūḍuvavarige dīkṣāguru tāneyāgi, nānā vidhada guṇada svānubhāvada maneya bhānuvina udayadali vikāsavāgi, nānā guṇarūpa kapilasid'dhamallikārjunana kūḍida sukhatarada arūpavāgi.