ತಾತ್ಪರಿಯವೆಂಬ ಮನೆಯಲ್ಲಿ ಕರಣಂಗಳ ಬೆಳಗಿ
ಆನಂದವೆಂಬಾತಂಗೆ ಭಕ್ತಿಮುಕ್ತ್ಯಂಗನೆಯರು
ನಿಶ್ಚಲದಿಂದ ನಿತ್ಯಂಗೆ ಬೋನವ ಮಾಡುತೈದಾರೆ.
ಆ ಬೋನ ಧ್ಯಾನಸಮಾಧಿಯ ಮೀರಿತ್ತು.
ಅದೆ ನಿತ್ಯಚೊಕ್ಕರಸ[ವುಂಬ]ಯೋಗಿಗಳಿಗೆ
ಯೋಗಕ್ಕೆ ನೆಲೆಯಾಗುತ್ತದೆ.
ಬೀಜವು ತಾನೆ, ಓಗರವು ತಾನೆ, ತೃಪ್ತಿಯು ತಾನೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ
ಕೂಡುವ ತತ್ವವು ತಾನೆ!
Art
Manuscript
Music
Courtesy:
Transliteration
Tātpariyavemba maneyalli karaṇaṅgaḷa beḷagi
ānandavembātaṅge bhaktimuktyaṅganeyaru
niścaladinda nityaṅge bōnava māḍutaidāre.
Ā bōna dhyānasamādhiya mīrittu.
Adē nityacokkarasa[vumba]yōgigaḷige
yōgakke neleyāguttade.
Bījavu tāne, ōgaravu tāne, tr̥ptiyu tāne,
kapilasid'dhamallikārjunayyana
kūḍuva tatvavu tāne!