ವಚನ - 628     
 
ದಾಯವ ನುಂಗಿದ ಬಣ್ಣ, ಬಣ್ಣವ ನುಂಗಿದ ದಾಯ ರಂಜನ ಪ್ರವೇಶವಾದಲ್ಲಿ ಲೀಯವಾದೆನಯ್ಯಾ. ನಿನ್ನೊಡನೆ ಲೀಯವಾದೆ. ಶುದ್ಧ ಸಿದ್ಧಪ್ರಸಿದ್ಧದಲ್ಲಿ ಪ್ರವೇಶಿಸಿದೆ. ಸಂಯೋಗಸ್ಥಾನದಲ್ಲಿ ನೀ ಸಹಿತ ವಿಯೋಗಿಯಾದೆ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಸೀಮೆಯ ಮೀರಿ ಸಂಬಂಧಿಯಾದೆನು.