•  
  •  
  •  
  •  
Index   ವಚನ - 629    Search  
 
ದಾಯವೆಂಬ ಕುಳಿಯಲ್ಲಿ ಅದ್ದರು, ಅನಂತಕೋಟಿ ಜನರು. ಆಳುತ್ತ ಮುಳುಗುತ್ತೈದಾರೆ, ಕೋಟಿ ಕೋಟಿ ಬ್ರಹ್ಮಾದಿಗಳು. ಆಳುತ್ತೇಳುತ್ತೈದಾರೆ, ಅನೇಕ ಕೋಟಿ ವಿಶ್ವಾದಿಗಳು. ಗುರುಕರುಣದಿಂದ ಅಯ್ಯನಾಜ್ಞೆವಿಡಿದು ಅಕ್ಷರದ್ವಯದ ಆಧಾರವಿಡಿದವರೆಲ್ಲಾ ಆ ಕುಳಿಗೆ ಹೊರಗಾದರು, ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಮಹಾಬೆಳಗಿನಲ್ಲಿ ಬಯಲಾದರು.
Transliteration Dāyavemba kuḷiyalli addaru, anantakōṭi janaru. Āḷutta muḷuguttaidāre, kōṭi kōṭi brahmādigaḷu. Āḷuttēḷuttaidāre, anēka kōṭi viśvādigaḷu. Gurukaruṇadinda ayyanājñeviḍidu akṣaradvayada ādhāraviḍidavarellā ā kuḷige horagādaru, kapilasid'dhamallikārjunayyanemba mahābeḷaginalli bayalādaru.