ದಾಯವ ನುಂಗಿದ ಬಣ್ಣ,
ಬಣ್ಣವ ನುಂಗಿದ ದಾಯ
ರಂಜನ ಪ್ರವೇಶವಾದಲ್ಲಿ ಲೀಯವಾದೆನಯ್ಯಾ.
ನಿನ್ನೊಡನೆ ಲೀಯವಾದೆ.
ಶುದ್ಧ ಸಿದ್ಧಪ್ರಸಿದ್ಧದಲ್ಲಿ ಪ್ರವೇಶಿಸಿದೆ.
ಸಂಯೋಗಸ್ಥಾನದಲ್ಲಿ ನೀ ಸಹಿತ ವಿಯೋಗಿಯಾದೆ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ಸೀಮೆಯ ಮೀರಿ ಸಂಬಂಧಿಯಾದೆನು.
Transliteration Dāyava nuṅgida baṇṇa,
baṇṇava nuṅgida dāya
ran̄jana pravēśavādadalli līyavādenayyā.
Ninnoḍane līyavāde.
Śud'dha sid'dhaprasid'dhadalli pravēśisalāgide.
Sanyōgasthānadalli nī sahita viyōgiyāde.
Kapilasid'dhamallikārjunayya
sīmeya mīri sambandhiyādenu.