ವಚನ - 649     
 
ದೇವಿಯರಿಬ್ಬರಿಲ್ಲದಂದು, ಪ್ರಧಾನಿಮಂತ್ರಿಗಳಿಲ್ಲದಂದು, ಆರಾರೂ ಇಲ್ಲದಂದು ನೀನಾದಿಮುಖಶೂನ್ಯನಯ್ಯಾ. ಅರ್ಥಾಂತಾನ್ವಯಕೆ ನೀ ಮೂಲನೆಂಬೆ. ನಿನ್ನೊಡನೆ ಬಂದಾತ ಬಸವಣ್ಣ. ನೀನು ತಮಂಧದಲ್ಲಿ ಜ್ಞಾನಭಾಸ್ಕರದೀಪ್ತಿಯಂ ಪ್ರವೇಶಿಸಲುಪಟ್ಟಡೆ, ನೀ ಸಕಲವನು ನಿಃಕಲವನು ಪ್ರಾಪಂಚಿಕವನು ತಾತ್ಪರ್ಯವ ಮಾಡುವಾಗ ನೀನೆ ಎಂದೆಂಬೆ, ಅದು ಬಸವಣ್ಣನನುಮತ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀನನಾದಿಮೂಲದೊಡೆಯನೆಂದೆಂಬೆ. ನಿಮ್ಮ ಬಲ್ಲಾತ ಬಸವಣ್ಣ; ಗುರು-ಲಿಂಗ-ಜಂಗಮತ್ರಯವು ಬಸವಣ್ಣನಂಶಿಕವು.