ವಚನ - 653     
 
ದೇಹಸಂಗವ ಕಳೆದು ವಾಯು ಪ್ರಾಣವ ಕೊಂದು ಕಾಯ ನಿರ್ಮಳತೆಯನು ಮಾಡಿ ಎನ್ನ ವಾಯದಲೋನ್ನತದ ವ್ಯಾಕುಲವ ಬಿಡಿಸೀಗ ಏಕಾಕ್ಷರದ ಭೇದವನರುಪಿ ಚತುಃಪದವನತಿಗಳೆದು ಶುದ್ಧ ಆನಂದ ಭಾವತ್ರಯಲಿಂಗ ಮೂಲವನು ಮಾಡಿ[ಭಾ]ವಿಸುತ ಸಕಳ ನಿಃಕಳ ತತ್ತ್ವ ತುರೀಯ ತ್ವಂಪದ ತತ್ತ್ವಾರ್ಥವನೋರಂತೆ ಅರುಪಿದ ಆನಂದ ತತ್ತ್ವಾತೀತನು ಶ್ರೀಗುರು ಚೆನ್ನಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.