•  
  •  
  •  
  •  
Index   ವಚನ - 682    Search  
 
ನಾನೇನ ಮಾಡುವುದೆಲ್ಲವನು ನೀನೆಂದೆ ಇದ್ದೆನಯ್ಯಾ. ನಾನೇನ ಮಾಡುವುದೆಲ್ಲವನು ನೀನೆ ಅಲ್ಲವೆಂದಡೆ ಅದು ಮಾಣಲಿ, ನಿಮ್ಮಾಣತಿ. ಕಾಣಬಾರದ ಘನವ ಕಾಯದಲ್ಲಿ ಧರಿಸಿ, ಹೇಳಬಾರದ ನಿಜವ ಮನದಲ್ಲಿ ನೆಲೆಗೊಳಿಸಿ, ತೋರಬಾರದ ಕುರುಹ ಎನ್ನರಿವಿನಲ್ಲಿರಿಸಿ ಇನ್ನು ನಿಮ್ಮ ಕಾಂಬಂತೆ ಮಾಡಾ, ಕಪಿಲಸಿದ್ಧಮಲ್ಲಿನಾಥಾ.
Transliteration Nānēna māḍuvudellavanu nīnende iddenayyā. Nānēna māḍuvudellavanu nīne allavendaḍe adu māṇali, nim'māṇati. Kāṇabārada ghanava kāyadalli dharisi, hēḷabārada nijava manadalli nelegoḷisi, tōrabārada kuruha ennarivinallirisi innu nim'ma kāmbante māḍā, kapilasid'dhamallinātha.