ವಚನ - 685     
 
ನಾsಭುಕ್ತಂ ಕ್ಷೀಯತೇ ಕರ್ಮ ಎಂದುದಾಗಿ ಬಾಳದಕ್ಷರವ ತೊಡೆಯಲಿಕೆ ಆರಳವಯ್ಯಾ, ಗುರುಕಾರುಣ್ಯವುಳ್ಳವರಿಗಲ್ಲದೆ? ಗುರುವೆ, ಎನ್ನ ಭವಕ್ಕೆ ಬಾರದಂತೆ ತಪ್ಪಿಸಿದೆ; ತೋರಿಸಿದೆ ಉರುತರ ಪಾದೋದಕ-ಪ್ರಸಾದವ; ನಿನ್ನ ಗುಣದಿಂದ ತನುಗುಣ ನಾಸ್ತಿಯಾದೆ. `ನಾsಭುಕ್ತಂ' ಎಂಬುದ ಮೀರಿ ಶಿವಭೋಕ್ತೃವಾದೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿನ್ನ ಕೂಡಿದೆ.