ವಚನ - 684     
 
ನಾ ಬಲ್ಲೆನೈ ನಿನ್ನ, ನೀ ಬಲ್ಲೆಯೈ ಎನ್ನ. ಆರಯ್ಯ ಬಲ್ಲನೈ ಬಸವಣ್ಣನು. ಭಾನುವಿನ ಉದಯಕ್ಕೆ ಆದಿಯಕ್ಷರ ಭೇದ ಆನತದಿ ನೀನಾದೆ ಬಸವ ತಂದೆ. ಸೀಮೆಗೆಟ್ಟಾ ಲೋಕ ಏನಾದಡೇನಯ್ಯಾ ಆನು ನಿನ್ನೊಳಗಡಗಿ ಐಕ್ಯಪದದ ಆನತವನೈದಿ ನಾ ಕೂಡೆ ಸುಖಿಯಾದ ಬಳಿಕೇನಾದಡೇನಯ್ಯ ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಾ.