Index   ವಚನ - 699    Search  
 
ನಿನ್ನನೊಲಿಸುವಡೆ ನಿರಹಂಭಾವವೆ ತೃಪ್ತಿ; ಅನ್ಯಭಾವಂಗಳನೊಲ್ಲೆನಯ್ಯಾ. ಹೊನ್ನು ಹೆಣ್ಣು ಮಣ್ಣು ಮುನ್ನವೆ ಸಟೆ ಮಾಡಿ, ದಾಸೋಹದಲ್ಲಿ ಸುಖಿಯಾದೆನಯ್ಯಾ, ಕಪಿಲಸಿದ್ಧಮಲ್ಲೇಶ್ವರಾ.