ವಚನ - 701     
 
ನಿನ್ನವರ ಮೂರ್ತಿಧ್ಯಾನದಿಂದ ನೀನಪ್ಪೆ ಅಪ್ಪೆನಪ್ಪೆನಯ್ಯಾ ದ್ವಯವಿಲ್ಲದೆ. ನೀ ಬಂದು ಇರಿಸಿದಂತೆ ಇದ್ದು ಹೇಳಿದ ಹಾಂಗೆ ನೆನೆದೆನಾದಡೆ ಆನವರಪ್ಪುದೇನರಿದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.