ವಚನ - 703     
 
ನಿಮ್ಮ ನಂಬಲೊಲ್ಲದ ಸಂದೇಹಿ ಮನಂಗಳ ಸಂದುಗಳ ಬಿಚ್ಚಿ ಪರಿದೆಂದಿಂಗೆ ಪೋಪವು, ಎಂದು ನಿಮ್ಮೊಡಗೂಡಿ ಬೇರಾಗದೆಂದಿಪ್ಪೆನು ಕಪಿಲಸಿದ್ಧಮಲ್ಲಿಕಾರ್ಜುನಾ.