Index   ವಚನ - 724    Search  
 
ನೆನಹಿನ ಮನೆಯೊಳಗೆ ಆನಿದ್ದೇನೆಂದಡೆ ಮನವು ಮತ್ತನ್ಯಕ್ಕೆ ಹರಿವುದಯ್ಯಾ. ಮನಕ್ಕಿನ್ನೇವೆನೇವೆ? ಎನ್ನ ಮನದೊಡೆಯ ಮಹಾದಾನಿ ನಿನ್ನ ಪಾದಂಗಳನುರೆ ಮಚ್ಚಿಸಿ ಎನ್ನ ಶುದ್ಧಾತ್ಮನ ಮಾಡಿ ಕರುಣಿಸಯ್ಯಾ ಪರಮಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.