ವಚನ - 725     
 
ನೆನಹಿನ ಸಂಯೋಗದಾ ನೆಲೆಮನೆಯಲ್ಲಿಪ್ಪೆ ಕಂಡವ್ವಾ. ಚಲನೆಯಿಲ್ಲದೆ ಕೂಡವ್ವಾ. ಅವ್ವಾ ನೀನು ಚಲನೆಯಿಲ್ಲದೆ ಕೂಡಾ. ಚಿತ್ತವಿಚಿತ್ತವಾದಡೆ ಮತ್ತೆ ಒಲಿಯನವ್ವಾ, ಕಪಿಲಸಿದ್ಧಮಲ್ಲಿನಾಥಯ್ಯ.