ವಚನ - 747     
 
ಪರಮಪದದಲ್ಲಿ ಅರಿದಪ್ಪ ಆಳಾಪವ ಅಜಲೋಕದಲ್ಲಿ ಮಾಡುವೆ. ಎಲೆ ಭ್ರಮರಾ, ಬಲ್ಲಾ ಅಯ್ಯನ ಸುದ್ದಿಯ? ಅಯ್ಯ ಎದೆಗೆ ಚರ್ಮವಂ ಹೊದೆದು ಶುದ್ಧ ಧವಳಿತವೆಂಬ ಮನೆಯಲ್ಲಿ ಕಾಮ್ಯಲಂಪಟಿಯ ಸಂಗವ ಮಾಡುವಾಗ ಬಲ್ಲಾ. ಉರುತರ ದಿವ್ಯಜ್ಞಾನ ಪ್ರವೇಶಿಸುವಾಗ ಆ ಕಾಮ್ಯಲಂಪಟಿ ಅಯ್ಯನೊಳು ಸಂದು ಸವದು ಒಂದಾದುದ ಬಲ್ಲಾ. ನಿತ್ಯಗುರು ನಿತ್ಯಲಿಂಗ ನಿತ್ಯಜಂಗಮವಲ್ಲದೆ ಅನಿತ್ಯನೆಂಬವರಿಗೆ ಅಪ್ಪುದೆ ಭಕ್ತಿ? ಕಪಿಲಸಿದ್ಧಮಲ್ಲಿಕಾರ್ಜುನಾ.