ಪರಿಭವಕ್ಕೆ ಬಪ್ಪ ಪರಮಾಣು ನೀನಲ್ಲ.
ಕುರುಹಿಂಗೆ ಬಂದ ಸೀಮ ನೀನಲ್ಲ.
ಏಕಯ್ಯ ನಿನಗೆ ಪ್ರಾಪಂಚಿಕವು?
ಆನಂದಮಧ್ಯದಲಿ ಅಪರವಾಗಿ,
ಅಪರಮಧ್ಯದಲಿ ಪೂರ್ವನಾಗಿ
ಆ ಪೂರ್ವಕ್ಕೆ ಒಡೆಯ ನೀನೆಯಾಗಿಪ್ಪೆ.
ಆರಯ್ಯಾ ಬಲ್ಲರು ನಿನ್ನ ಪರಿಯ?
ಶರಣಸತಿ ಲಿಂಗಪತಿಯಾಗಿದ್ದವರು ಬಲ್ಲರು.
ಏಕಲಿಂಗನಿಷ್ಠಾಪರರು ಅವರು ಬಲ್ಲರು.
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಏಕಯ್ಯಾ,
ಓಡಿದೆಯೆಂದು ನಂಬುಗೆಗೊಡುವಂತೆ ಕರಂಗೊಟ್ಟರು.
Art
Manuscript
Music
Courtesy:
Transliteration
Paribhavakke bappa paramāṇu nīnalla.
Kuruhiṅge banda sīma nīnalla.
Ēkayya ninage prāpan̄cikavu?
Ānandamadhyadali aparavāgi,
aparamadhyadali pūrvanāgi
ā pūrvakke oḍeya nīneyāgippe.
Ārayyā ballaru ninna pariya?
Śaraṇasati liṅgapatiyādavaru ballaru.
Ēkaliṅganiṣṭhāpararu avaru ballaru.
Kapilasid'dhamallikārjunayya ēkayyā,
ōḍideyendu nambugegoḍuvante karaṅgoṭṭaru.