ಪುಣ್ಯಪಾಪಂಗಳಾದಡೇನು?
ಈಶ್ವರ ಕಲ್ಪನೆಯಿಲ್ಲದನ್ನಕ್ಕ
ಮಾಡೆಂದು ಮಾಡಿಸಬಾರದಯ್ಯಾ.
ನೋಡಯ್ಯಾ ನೋಡಯ್ಯಾ ಮುನ್ನಿನ ಕಲ್ಪನೆಯುಳ್ಳವರ
ಬೇಡೆಂದು ಮಾಣಿಸಬಾರದಯ್ಯಾ, ನೋಡಾ!
ಅಯ್ಯಾ, ನೀನೆಹಗೆ ಕಲ್ಪಿಸಿದೆ ಅಹಗೆ ಅಹರು
ಎನ್ನ ಕಪಿಲಸಿದ್ಧಮಲ್ಲೇಶ್ವರದೇವ.
Transliteration Puṇyapāpaṅgaḷādaḍēnu?
Īśvara kalpaneyilladannakka
māḍendu māḍisabāradayyā.
Nōḍayya nōḍayya munnina kalpaneyuḷḷavara
bēḍendu māṇisabāradayya, nōḍā!
Ayyā, nīnehage kalpiside ahage aharu
enna kapilasid'dhamallēśvaradēva.