Index   ವಚನ - 782    Search  
 
ಪ್ರಾಪಂಚಿಕವ ಮೀರಿ ಪರಮಾಣನತಿಗಳೆದು ನಾದ ಬಿಂದುವಿನಲ್ಲಿ ಆದಿಯಾಗಿ ಮೋದದೊಂದಾಮೋದ ಆನಂದ ಮಧ್ಯಮದ ಭೇದವನು ಭೇದಿಸುವ ತಾನು ತಾನೆ ಸೂಕ್ಷ್ಮದ ಘನತೆಯಲು ಆನಂದದಾಂದೋಳು ಭೇದಿಸಿಯೆ ಕಂಡೆ ನಾ. ಶುದ್ಧ ಮಧ್ಯಮದಲಿ ಭೇದಕ್ಕತೀತನಾ ಕಪಿಲಸಿದ್ಧಮಲ್ಲೇಶ್ವರನು, ನಾದ ಬಿಂದುವಿನಲ್ಲಿ ಪೂರ್ಣನಾಗಿ.