•  
  •  
  •  
  •  
Index   ವಚನ - 783    Search  
 
ಪ್ರಾಪಿತವೇಕೆ ಬಾರದಯ್ಯಾ? ಇಂದಿನ ಅವಸ್ಥೆಗೆ! ಕಲ್ಪಿತವೇಕೆ ಬಾರದಯ್ಯಾ? ಇಂದಿನ ಅವಸ್ಥೆಗೆ! ಲಿ[ಖಿತ]ವೇಕೆ ಬಾರದಯ್ಯಾ? ಇಂದಿನ ಅವಸ್ಥೆಗೆ! ಇಂದಿನಿತು ಏಕೆ ಬಾರದು? ನಾನೇನು ಮಾಡುವೆನು ದೇವಾ! ಅಯ್ಯಾ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ, ನಿನಗೆ ಕೂಪ ಅವಸ್ಥೆಯಲಿ ಪ್ರಾಣ ಬಿಡದು ಲಿ[ಖಿತ]ಬಾರದು ಎನ್ನನಿಂತಿರಿಸುವರೆ ಹೇಳೆಲೆ ದೇವಯ್ಯಾ.
Transliteration Prāpitavēke bāradayyā? Indina avasthege! Kalpitavēke bāradayyā? Indina avasthege! Li[khita]vēke bāradayyā? Indina avasthege! Indinitu ēke bāradu? Nānēnu māḍuvenu dēvā! Ayyā enna kapilasid'dhamallināthayya, ninage kūpa avastheyali prāṇa biḍadu li[khita]bāradu ennanintirisuvare hēḷele dēvayya.