ಫಲ ಪದವನತಿಗಳೆದು
ಹೊಲೆಗಲಸಿ ದಲಗೆಟ್ಟು
ಕುಲವನಾಳಿದವರಾರೊ ಅಯ್ಯಾ.
ನೀ ಸಲ್ಲದಿನ್ನು ನೆಲೆಗೆಟ್ಟು ಬ್ರಹ್ಮದೊಳಗೆ,
ಅಯ್ಯ, ನಿನ್ನ ಹೊಲೆಗಲಸಿ ಹೊರಗಾದೆ.
ಅಯ್ಯಾ, ದಲವೆ ಫಲವಾಗಿ
ಹೊಲೆಯ ನೆಲೆಯಾದಡೆ
ಒಲವು ತಪ್ಪದು ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Phala padavanatigaḷedu
hoḷegalasi dalageṭṭu
kulavanāḷidavarāro ayyā.
Nī salladinnu nelegeṭṭu brahmadoḷage,
ayya, ninna hoḷegalasi horagāde.
Ayya, dalave phalavāgi
holeya neleyādaḍe
olavu tappadu kapilasid'dhamallikārjunā.