ಫಲಪದಾದಿಗಳ ಭಕ್ತರಿಗೆ ಕೊಟ್ಟೆನೆಂದೆಂಬೆ;
ಅವರವನೊಲ್ಲರು!
ಅವರು ನಿನಗೆ ನಿನ್ನ ರೂಪಿಂಗೆ
ತನುಮನಧನಾದಿಗಳ ಕೊಡುವರು.
ಎಲೆ ವಂಚಕನಾದ ಶಿವನೆ, ನಿರ್ವಂಚಕರೆಮ್ಮವರು!
ನಿನ್ನನೇನ ಬೇಡುವರವರು? ನೀನೇನನವರಿಗೆ ಕೊಡುವೆ?
ನಿನ್ನ ಕೊಡನೆಮ್ಮವರೊಲ್ಲರು ಕಾಣಾ,
ಕೊಡು, ಕೊಡದೆ ಹೋಗು,
ಕಪಿಲಸಿದ್ಧಮಲ್ಲಿಕಾರ್ಜುನಾ!
Art
Manuscript
Music
Courtesy:
Transliteration
Phalapadādigaḷa bhaktarige koṭṭenendembe;
avaravanollaru!
Avaru ninage ninna rūpiṅge
tanumanadhanadigaḷa koḍuvaru.
Ele van̄cakanāda śivane, nirvan̄cakarem'mavaru!
Ninnanēna bēḍuvavaru? Nīnēnavarige koḍuve?
Ninna koḍanem'mavarallaru kāṇā,
koḍu, koḍade hōgu,
kapilasid'dhamallikārjunā!