ಬಾರದ ಭವವ ಬಂದೆನುಣ್ಣದುದನುಂಡೆನಯ್ಯಾ;
ನಾನು ಮಾಡಿದುದನು.
ಇನ್ನು ಭವಕ್ಕೆ ಬಾರದಂತೆ ಮಾಡ ತಂದೆ.
ಕರ್ಮವನುಣ್ಣದಂತೆ ನಿರೂಪಿಸಯ್ಯಾ,
ಅಯ್ಯಾ ನಿಮ್ಮ ಧರ್ಮ.
ವಿಚಿತ್ರಮೂಲ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ,
ನಿಮ್ಮ ಹತ್ತೆ ಸಾರುವ ಮನಕ್ಕೆ
ಮಂಗಳವನೀಯಯ್ಯಾ ಗುರುವೆ.
Transliteration Bārada bhavava bandenuṇṇadudanuṇḍenayyā;
nānu māḍidudanu.
Innu bhavakke bāradante māḍa tande.
Karmavanuṇṇadante nirūpisayyā,
ayyā nim'ma dharma.
Vicitramūla kapilasid'dhamallikārjunayyā,
nim'ma hatte sāruva manakke
maṅgaḷavanīyayyā guruve.