Index   ವಚನ - 809    Search  
 
ಬಾರಯ್ಯಾ, ಎನ್ನ ಸರ್ವಾಂಗದ ಗಂಡನೆ. ಬಾರಯ್ಯಾ, ಎನ್ನ ಹೃದಯಕಮಲದಳಾಸನನೆ. ಬಾರಯ್ಯಾ, ಎನ್ನ ಚಿತ್ತದ ಸೌಂದರನೆ. ಬಾರಯ್ಯಾ, ಎನ್ನ ಶುದ್ಧ ಸಿದ್ಧ ಪ್ರಸಿದ್ಧ ಪ್ರಾಣೇಶ್ವರನೆ. ಬಾರಯ್ಯಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ, ಸಂದಿಲ್ಲದೆ.