•  
  •  
  •  
  •  
Index   ವಚನ - 810    Search  
 
ಬಾಲನಾಗಿದ್ದಂದು ಕರೆದು ಎತ್ತಿ ಮುದ್ದಿಕ್ಕಿ ಮೊಲೆವಾಲಕೊಟ್ಟು ಸಲಹಿದ ಬಸವಾ. ಮೂಲ ಶಿವಜ್ಞಾನಕ್ಕೆ ದೀಪ್ತಿಯನಿಕ್ಕಿ ಸಲಹಿದ ಬಸವಾ. ಎನಗೆ ನೀನೆ ಗತಿಯಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ ಬಸವಾ.
Transliteration Bālanāgiddu karedu etti muddikki molevālakoṭṭu salahida basavā. Mūla śivajñānakke dīptiyanikki salahida basava. Enage nīne gatiyayya, kapilasid'dhamallināthayya basavā.