•  
  •  
  •  
  •  
Index   ವಚನ - 816    Search  
 
ಬಿಳಿಯಗಿರಿ ತಳವೆಳಗಾಗಿ ಬೆಳೆಯೆ ಅನುವಿಡಿದು ಸುಖವ ಕಂಡು ಅನುಭವದವಳಿಗೆ ಮಿಂಚುವರ್ಣ ಸುಖವನೇಕೀಕರಿಸಿ ನೋಡಲು ಅನುವಾಯಿತ್ತಯ್ಯಾ ಬೆಳ್ಪಿನ ಹದಿನಾರೆಸಳ ಪೀಠ. ಆ ಪೀಠದಲ್ಲಿ ಸಜ್ಜನನೆಂಬವ ನಿಂದು ಪ್ರಸಾದವಿಡಿದು ನಡೆಯೆ ವ್ಯೋಮದ ಗುಣ ಕೆಟ್ಟು ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನಿಂದ ಬದುಕಿದೆನು.
Transliteration Biḷiyagiri taḷaveḷagāgi beḷeye anuviḍidu sukhava kaṇḍu anubhavadavaḷige min̄cuvarṇa sukhavanēkīkarisi nōḍalu anuvāyittayyā beḷpina hadināresaḷa pīṭha. Ā pīṭhadalli sajjananembava nindu prasādaviḍidu naḍeye vyōmada guṇa keṭṭu nelegoṇḍanayyā nim'ma śaraṇa cennabasavaṇṇanu. Kapilasid'dhamallināthayya, cennabasavaṇṇaninda badukidenu.