ಭಾವ ಬಲಿಸಬೇಕಲ್ಲದೆ ವಿಭಾವ ಮಾಡಲುಂಟೆ?
ಗುರುಭಕ್ತಿಯಲ್ಲಿ ಭಾವ ಬಲಿದುದೆ ಬ್ರಹ್ಮಜ್ಞಾನ;
ಗುರುಭಕ್ತಿಯಲ್ಲಿ ಭಾವ ನಿಂದುದೆ ಸಹಜಸ್ಥಿತಿ
ಗುರುಭಕ್ತಿ ಮರೆವ ಅರಿವ ಮರೆತುದೆ,
ಕಪಿಲಸಿದ್ಧಮಲ್ಲಿಕಾರ್ಜುನದೇವನ ಮಹಾಮನೆ;
ಇದು ಸತ್ಯ ಕೇಳಾ ಶಿವತಾಯಿಯೆ.
Transliteration Bhāva balisabēkallade vibhāva māḍaluṇṭe?
Gurubhaktiyalli bhāva balidude brahmajñāna;
gurubhaktiyalli bhāva nindude sahajasthiti
gurubhakti mareva ariva maretu,
kapilasid'dhamallikārjunadēvana mahāmane;
idu satya kēḷā śivatāyiye.