•  
  •  
  •  
  •  
Index   ವಚನ - 842    Search  
 
ಭಾವಿಸಿದರೆ ಹೆಂಗೂಸು ನಡುವೆ ನಿಂದಿರೆ ಹೆಂಪುಳ್ಳ ಗಂಡುಗೂಸು! ಒಬ್ಬ ತನಗೆಂಬ ಒಬ್ಬ ತನಗೆಂಬ ಸುತ್ತಿ ನೋಡಿ ಸುಯ್ವಳು ಹೋ! ಎಮ್ಮಿಂದ ನಿಮಗೆ ವಿವಾಹ ಬೇಡಯ್ಯಾ, ಎಮ್ಮ ಗಂಡ ಬಾಯಾಳು, ಕಪಿಲಸಿದ್ಧಮಲ್ಲಿನಾಥಾ.
Transliteration Bhāvisidare heṅgūsu naḍuve nindire hempuḷḷa gaṇḍugūsu! Obba tanagemba obba tanagemba sutti nōḍi suyvaḷu hō! Em'minda nimage vivāha bēḍayya, em'ma gaṇḍa bāyāḷu, kapilasid'dhamallinātha.