ಮಡದಿಯರೈವರ ಗಂಡರ ಪಿಡಿದೊಯ್ದರು ಕಳ್ಳರು.
ಮಡದಿ ಮೊರೆಯಿಟ್ಟೆಹೆನೆಂದು ಅರಸಿನ ಗ್ರಾಮಕ್ಕೆ ಬರಲು,
ಅರಸು ಅಂತಃಪುರದೊಳಗೈದಾನೆ.
ಅರಸನ ಕೂಡೆ ಏಕಾಂತವ ಮಾಡುವ
ಪ್ರಧಾನಿಯ ಕಂಡು ಮೊರೆಯಿಟ್ಟಡೆ,
ಪ್ರಧಾನಿ ಪಾಲಿಸುತಿರ್ದ ಬಗೆಯ ನೋಡಾ,
ಕಪಿಲಸಿದ್ಧಮಲ್ಲಿನಾಥಯ್ಯಾ!
Transliteration Maḍaḍiyaraivara gaṇḍara piḍidoydaru kaḷḷaru.
Maḍadi moreyiṭṭehenendu arasina grāmakke baralu,
arasu antapuradoḷagaidāne.
Arasana kūḍe ēkāntava māḍuva
pradhāni kaṇḍu moreyiṭṭaḍe,
pradhāni pālisutirda bageya nōḍā,
kapilasid'dhamallināthayya!