ಮತ್ತೆ ಮತ್ತೆ ತನ್ನ ಚಿತ್ತ ಮುಟ್ಟಿದಲ್ಲಿಗೆ
ಹೊತ್ತು ಹೊತ್ತು ತೊಳಲುತಿರ್ದಳವ್ವೆ.
ಚಿತ್ತ ಪರಿಪಕ್ವವಾದಡೆ, ಅವನ ಅಂಗದಲ್ಲಿ ಭೇದಿಸಿಹೆನೆಂದು
ಅಂಗ ಅನ್ಯಂಗವಾಗದ ಮುನ್ನ,
ಲಿಂಗ ನೀನೆಯಾದಳು ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನನವ್ವೆ.
Transliteration Matte matte tanna citta muṭṭiddakke
hottu hottu toḷalutirdaḷavve.
Citta paripakvavādaḍe, avana aṅgadalli bhēdisihenendu
aṅga an'yaṅgavāgada munna,
liṅga nīneyādaḷu kāṇā,
kapilasid'dhamallikārjunavve.